ಶ್ರೀಮತಿ ಪರಿಮಳ ರವರು ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿರುತ್ತಾರೆ. ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಉಂಟಾಗುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚಾಗುತ್ತದೆ ಜೊತೆಗೆ ಚರ್ಮದ ಕಾಯಿಲೆ ಬರುವುದಿಲ್ಲ, ಹಾಗೂ ಪ್ರತಿಯೊಬ್ಬರು 6 ತಿಂಗಳಿಗೊಮ್ಮೆ ರಕ್ತದಾನ ಮಾಡವುದರಿಂದ ಯಾವುದೇ ತರಹದ ಆರೋಗ್ಯ ಸಮಸ್ಯೆಗಳು ಸಂಭವಿಸುವುದಿಲ್ಲ. ಯಾರು ರಕ್ತದಾನ ಮಾಡಲು ಸಾಧ್ಯವಿಲ್ಲ ಎಂದರೆ ಪ್ರತಿ ಮಹಿಳೆ ಋತುಚಕ್ರವಾದ ನಂತರ, ಹಾಲು ಉಣಿಸುವ ತಾಯಂದಿರು, ಹಾಗೂ ರಕ್ತದ ಒತ್ತಡ ಇರುವ ಮಹಿಳೆಯರು / ಪುರುಷರು ರಕ್ತ ಕೊಡುವುದಕ್ಕೆ ಸಾಧ್ಯವಿಲ್ಲ. ಇನ್ನು ಉಳಿದಂತಹ ವಯಸ್ಕರು ಅಂದರೆ 18 ರಿಂದ 65 ವರ್ಷದ ಒಳಗಿನವರು ಯಾರಾದರು ರಕ್ತದಾನ ಮಾಡಬಹುದು. ರಕ್ತದಾನ ಮಾಡಲು ಕನಿಷ್ಠ 45-50 ಕೆಜಿ ತೂಕದ ಅಗತ್ಯವಿದೆ. ರಕ್ತದಾನವು ದಾನಿಗಳಿಗೆ ಸಮಾನವಾಗಿ ಪ್ರಯೋಜನಕಾರಿಯಾಗಿದೆ. ದೈಹಿಕ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ, ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಸಹ ಪಡೆಯಬಹುದು. ಎಂದು ಒಂದು ಅರಿವಿನ ಹಾಡಿನ ಮೂಲಕ ಎಲ್ಲರ ಮನಮುಟ್ಟುವಂತೆ ಅತ್ಯುತ್ತಮವಾಗಿ ಮಾಹಿತಿ ಹಂಚಿಕೊಂಡರು.
ತದನಂತರ ಶ್ರೀಮತಿ ಶಾಂತರವರು ಜಾಗತಿಕ ತಾಪಮಾನದ ಕುರಿತು ಮಾತಾನಾಡಿದರು. ಈ ಭೂಮಿ ಇರುವುದು ಮನುಷ್ಯರ ಆಸೆ ಪೂರೈಸಲು ಹೊರತು, ದುರಾಸೆಗಳಿಗಲ್ಲ. ಇಂದು ಮನುಕುಲ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಜಾಗತಿಕ ತಾಪಮಾನವು ಒಂದಾಗಿದೆ. ಇದಕ್ಕೆ ಮೂಲ ಕಾರಣ ನಾವೇ(ಮನುಷ್ಯರು) ಮಾನವ ತನ್ನ ಸುಖ ಸಂಪತ್ತುಗಳಿಗಾಗಿ ನಿಸರ್ಗಕ್ಕೆ ಮಾಡಿದ ಹಾನಿಯಿಂದ ಇಂದು ನಿಸರ್ಗ ನೀಡುತ್ತಿರುವ ಪರಿಣಾಮವೇ ಜಾಗತಿಕ ತಾಪಮಾನ.
ಜಾಗತಿಕ ತಾಪಮಾನಗಳಲ್ಲಿ ವಿವಿಧ ರೀತಿಯ ಮಾಲಿನ್ಯಗಳಿವೆ. ಅವುಗಳಲ್ಲಿ, ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದ ಮಾಲಿನ್ಯ , ಉಷ್ಣ ಮಾಲಿನ್ಯ, ವಿಕಿರಣ ಮಾಲಿನ್ಯ.
ಈ ಮಾಲಿನ್ಯಗಳಿಂದ ಹೊರಬರಲು ನಾವುಗಳು ಅನುಸರಿಸಬೇಕಾದ ವಿಧಾನಗಳೆಂದರೆ, ಪ್ರತಿ ಮನೆಗಳಲ್ಲಿ ಒಂದು ಗಿಡ ಬೆಳೆಸಬೇಕು. ಕಾಡು ನಾಶ ಮಾಡಬಾರದು, ಮರ ಕಡಿಯಬಾರದು, ವಾಹನಗಳ ಬಳಕೆ ಕಡಿಮೆ ಮಾಡಬೇಕು, ಮಿತವಾಗಿ ಪ್ಲಾಸ್ಟಿಕ್ ಬಳಕೆ, ನೀರು ಮಿತ ಬಳಕೆ ಮತ್ತು ಇಂಗಿಸುವಿಕೆ. ಹಾಗೂ ವಾಹನಗಳ ಉಪಯೋಗ ಮಾಡಲೆಬೇಕಾದರೆ ಕನಿಷ್ಠ ನಮ್ಮ ಮನೆಯಲ್ಲಿ ಒಂದು ಗಿಡವಾದರು ಇರಬೇಕು. ಎಂದು ಒಂದು ಸಣ್ಣ ಕಥೆಯೊಂದಿಗೆ ಎಲ್ಲರಿಗೂ ಮನವೊಲಿಸುವಂತೆ ಮಾಹಿತಿಯನ್ನು ನೀಡಿದರು.
ಆ ದಿನದ ಮುಂದುವರೆದ ತರಬೇತಿಯಲ್ಲಿ ಶ್ರೀಮತಿ ತೆರೆಸಾರವರು ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಆಗುವ ಪ್ರಯೋಜನಗಳ ಕುರಿತು ಮಾತಾನಾಡಿದರು.
ಸಹಾಯ ಮಾಡುವುದರಿಂದ ನಮ್ಮಲ್ಲಿ ಆಗುವ ಬದಲಾವಣೆ, ಸಂತೋಷ ಮತ್ತು ಆನಂದಕ್ಕೂ ಇರುವ ವ್ಯತ್ಯಾಸಗಳನ್ನು ಬಹಳ ಅರ್ಥ ಪೂರ್ಣವಾಗಿ ತಿಳಿಸಿದರು. ಸಹಾಯ ಮಾಡುವುದನ್ನು ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಅದರಿಂದ ನಮಗೆ ಮತ್ತು ನಮ್ಮ ಕುಟುಂಬಕ್ಕೆ ಆಗುವ ಪ್ರಯೋಜನವನ್ನು ಒಂದು ಉದಾಹರಣೆ ಮೂಲಕ ಎಲ್ಲರಿಗೂ ಮನವೊಲಿಸಿದರು. ಒಬ್ಬ ಮನುಷ್ಯ ದಾರಿಯಲ್ಲಿ ಹೋಗುತ್ತಿರುವಾಗ ಊಟದ ಬಾಕ್ಸ್ ತೆಗೆದುಕೊಂಡು ಹೋಗುತ್ತಿದ್ದ. ಅಲ್ಲಿ ಒಬ್ಬ ಬಿಕ್ಷುಕನಿಗೆ ಹಸಿವಿರುತ್ತದೆ. ಆಗ ಅಲ್ಲಿ ಸ್ವಾಮಿಜಿಯವರು ಬಂದು ಅವರಿಗೆ ಊಟ ಕೊಡಿ ಎಂಬುದಾಗಿ ಹೇಳಿದರು. ಆ ಊಟವನ್ನು ಕೊಟ್ಟಾಗ ಅವನಿಗೆ ಸಂತೋಷವಾಯಿತು. ಆ ಊಟವನ್ನು ತಿಂದ ಬಿಕ್ಷುಕನಿಗೆ ಆನಂದವಾಯಿತು. ಹೀಗೆ ಪರೋಪಕಾರ ಮಾಡುವುದರಿಂದ ನಮಗಾಗುವ ಉಪಯೋಗ ಮತ್ತು ಸಂತೃಪ್ತಿಯ ಕುರಿತು ತಿಳಿಸಿದರು. ಪ್ರತಿಯೊಬ್ಬರು ಸಹಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮಾತಾನಾಡಿ ಎಲ್ಲರ ಮನವೊಲಿಸುತ್ತಾರೆ.
ತದನಂತರ ಸಂಪನ್ಮೂಲ ವ್ಯಕ್ತಿಗಳಾಗಿ SMSSS ಸಂಸ್ಥೆಯ ಸಂಯೋಜಕರಾದ ಶ್ರೀ ಯುತ ಜಗದೀಶ್ ರವರು ಕಾರ್ಯಕ್ಷಮತೆಯ ಕುರಿತು ಮಾಹಿತಿ ನೀಡಿರುತ್ತಾರೆ.
ಒಂದು ಬಂಡಿ ಸಾಗಬೇಕಾದರೆ ಚಕ್ರ ಬಹಳ ಮುಖ್ಯ. ಆದರೆ ನಮ್ಮ (SMSSS) ಸಂಸ್ಥೆ ಸಾಗಬೇಕಾದರೆ ಯಾರು ಮುಖ್ಯ? ಎಂದು ಪ್ರಶ್ನೆ ಕೇಳವುದರ ಮೂಲಕ ತಮ್ಮ ಮಾಹಿತಿ ಕಾರ್ಯಗಾರ ಮುಂದುವರಿಸಿದರು. ನಮ್ಮ ಸಂಸ್ಥೆ ಸಾಗಲು ಸಿಬ್ಬಂದಿಗಳು ಬಹಳ ಮುಖ್ಯ. ಇದಕ್ಕೆ ನಾವು ಯಾವುದರಲ್ಲಿ ಸ್ಪಷ್ಟತೆಗಳು ಹೊಂದಿರಬೇಕು ಎಂಬುದಾಗಿ ಸಿಬ್ಬಂದಿಗಳಿಗೆ ಅರ್ಥಪೂರ್ಣವಾಗುವ ರೀತಿಯಲ್ಲಿ ತಿಳಿಸಿದರು. ಗುರಿ ಉದ್ದೇಶಗಳ ಕುರಿತು ಸ್ಪಷ್ಟತೆ, ಸಮಯಪಾಲನೆ, ಗುರಿಯನ್ನು ನಿಗದಿಪಡಿಸುವುದು, ಒಳ್ಳೆಯ ಮಾತುಗಾರಿಕೆ, ಶಿಸ್ತು, ಕ್ರಿಯಾಶೀಲತೆ, ಫಲಿತಾಂಶ ಆದಾರಿತ , ಪೂರ್ಣ ಸಿದ್ದತೆ, ದಾಖಲಾತಿಗಳು, ಹೊಸತನ ಇರಬೇಕು, ಅನುಸರಣೆಗಳು ಇರಬೇಕು, ಎಂದು ಒಂದು ಸಣ್ಣ ಕಥೆಯ ಮೂಲಕ ಮನದಟ್ಟು ಮಾಡಿ ತಿಳಿಸಿದರು. ಎಲ್ಲಾ ಮೌಲ್ಯಗಳ ಕುರಿತು ಸ್ಪಷ್ಟವಾಗಿ ಮಾಹಿತಿ ನೀಡಿ ಸಿಬ್ಬಂದಿಗಳಿಗೆ ಕೆಲಸದ ಮೇಲೆ ಇರುವ ಎಲ್ಲಾ ಪ್ರಾಮುಖ್ಯತೆಗಳು ಮನ ಮುಟ್ಟುವಂತೆ ತಿಳಿಸಿಕೊಟ್ಟರು. ನಂತರ ವಾರ್ಷಿಕ ಕ್ರಿಯಾಯೋಜನೆ ಸಿದ್ದತೆ ಮಾಡಲಾಯಿತು. ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಗುರಿ ಉದ್ದೇಶಗಳ ಸ್ಪಷ್ಟತೆ ನೀಡಿ ಪ್ರತಿಯೊಂದು ಉದ್ದೇಶಗಳಿಗೆ ಚಟುವಟಿಕೆ ನೀಡಲಾಯಿತು. ಎಲ್ಲಾ ಸಿಬ್ಬಂದಿಗಳು ಸಕ್ರಿಯಾವಾಗಿ ಪಾಲುಗೊಳ್ಳಲಾಯಿತು.
SMSSS ಸಂಸ್ಥೆಯು ಎಂದಿನಂತೆ ನಡೆಸಿಕೊಂಡು ಬಂದಿರುವ ಆ ತಿಂಗಳಿನ ಜನ್ಮದಿನದ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು. ಆ ದಿನದ ಆಚರಣೆಯಲ್ಲಿ ಶ್ರೀಮತಿ ಪ್ರಮೀಳಾ ಮೇರಿ ಮತ್ತು ನಾಗವೇಣಿಯವರ ಜನ್ಮ ದಿನದ ಆಚರಣೆಯನ್ನು ಮಾಡಲಾಯಿತು. ಆ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಶ್ರೀ ಮತಿ ಲೂಸಿ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಚಾಲನೆ ಮಾಡಲಾಯಿತು. ಶ್ರೀ ಮತಿ ರಾಜೇಶ್ವರಿ ರವರು ಎಲ್ಲರನ್ನು ಸ್ವಾಗತಿಸಿದರು. ಎಲ್ಲಾ ಸಿಬ್ಬಂದಿಗಳು ಎದ್ದು ನಿಂತು ಜನ್ಮದಿನದ ಹಾಡನ್ನು ಹೇಳಲಾಯಿತು. ಶ್ರೀಮತಿ ಪ್ರಮೀಳಾ ಮೇರಿ ಮತ್ತು ನಾಗವೇಣಿರವರು ಕೇಕ್ ಕತ್ತರಿಸುವ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಶ್ರೀ ಮತಿ ರಶ್ಮಿ ರವರು ಜನ್ಮದಿನದ ಆಚರಣೆಯ ವ್ಯಕ್ತಿಗಳಾದ ಶ್ರೀ ಮತಿ ಪ್ರಮೀಳಾ ಮೇರಿ ಮತ್ತು ನಾಗವೇಣಿ ರವರನ್ನು ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಶ್ರೀಮತಿ ಪ್ರಮೀಳಾ ಮೇರಿ ಮತ್ತು ನಾಗವೇಣಿ ರವರು ಕೂಡಾ ತಮ್ಮ ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅನಿಸಿಕೆಯನ್ನು ಹಂಚಿಕೊಂಡರು. ಶ್ರಿಮತಿ ಪ್ರಮೀಳಾರವರು ವಂದನೆಗಳೊಂದಿಗೆ ಸಭೆ ಮುಕ್ತಾಯಗೊಳಿಸಿದರು.
2025 ರ ವಾರ್ಷಿಕ ಕ್ರಿಯಾ ಯೋಜನೆ
ರೈತ ಗೀತೆಯೊಂದಿಗೆ ಪ್ರಾರ್ಥನೆ ಪ್ರಾರಂಭ ಮಾಡಲಾಯಿತು. ಶ್ರೀಮತಿ ಶ್ರೀ ದೇವಿರವರು ಎಲ್ಲರಿಗೂ ಸ್ವಾಗತಿಸಿದರು. SMSSS ಸಂಸ್ಥೆಯ ಸಂಯೋಜಕರಾದ ಶ್ರೀ ಯುತ ಜಗದೀಶ್ ರವರು 2025 ರ ಕಾರ್ಯಕ್ರಮ ಮತ್ತು ದಿನಾಚರಣೆ ಪಟ್ಟಿಯನ್ನು ಯೋಜನವಾರು ಗುಂಪು ಚರ್ಚೆ ಮಾಡಿ ಪಟ್ಟಿಗಳನ್ನು ಮಂಡಿಸಿದರು. ಮಕ್ಕಳ ಶಿಬಿರ[ಬೇಸಿಗೆ], ತಾಲ್ಲೂಕು ಮಟ್ಟದಲ್ಲಿ ಅನ್ನ ಸಂತರ್ಪಣೆ, ಮಹಿಳಾ ದಿನಾಚರಣೆ, ಆರೋಗ್ಯ ಶಿಬಿರ, ಪರಿಸರ ದಿನಾಚರಣೆ, ಕ್ಯಾನ್ಸರ್ ಅರಿವು ಕಾರ್ಯಕ್ರಮ, ಜೂನ್ ತಿಂಗಳಲ್ಲಿ ಶಾಲಾ ಪ್ರಾರಂಭದಲ್ಲಿ ಅರಳುವ ಹೂವುಗಳಿಗೆ [ಮಕ್ಕಳು] ಸ್ವಾಗತ ಕಾರ್ಯಕ್ರಮಗಳನ್ನು ಒಕ್ಕೂಟವಾರುಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಎಲ್ಲಾ ಒಕ್ಕೂಟಗಳಲ್ಲಿ ಬೇವು-ಬೆಲ್ಲ ಹಂಚಿಕೆ. ಈ ಎಲ್ಲಾ ಕಾರ್ಯಕ್ರಮಗಳನ್ನು 2025 ರ ವಾರ್ಷಿಕ ಅವಧಿಯಲ್ಲಿ ಪೂರ್ಣಗೊಳಿಸುವುದು SMSSS ಸಂಸ್ಥೆಯ ಮೂಲ ಉದ್ದೇಶವಾಗಿದೆ.
SMSSS ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಪಿಯುಸ್ ಡಿ'ಸೋಜ ರವರು ಈ ವರ್ಷದಲ್ಲಿ ನಮ್ಮ SMSSS ಸಂಸ್ಥೆಯಿಂದ ನಮ್ಮ ಗಮನ ಮಕ್ಕಳ ಅಭಿವೃದ್ಧಿಯ ನಿಟ್ಟಿನಲ್ಲಿ ಆಯೋಜಿಸಿರುವ ಶಿಬಿರಗಳ ಬಗ್ಗೆ ಮನವರಿಕೆ ಮಾಡಿ, ಈ ಶಿಬಿರದಲ್ಲಿ ಎಲ್ಲರ ಸಹಕಾರ ಮತ್ತು ಸಹಾಯ ತುಂಬಾ ಮುಖ್ಯ ಎಂದು ತಿಳಿಸಿದರು. ತರಗತಿವಾರು ಶಿಬಿರಗಳನ್ನು ನಡೆಸುವ ಬಗ್ಗೆ ವಿವರವಾಗಿ ತಿಳಿಸಿದರು.
ಕ್ರಿಯಾಯೋಜನೆ ಮಧ್ಯದಲ್ಲಿ ಕಾರ್ಯಕರ್ತೆಯರ ಗಮನ ಸೆಳೆಯಲು ಚಟುವಟಿಕೆ ಮಾಡಲಾಯಿತು. ಏಕಾಗ್ರತೆ ,ಬಂಡವಾಳ ಕ್ರೋಡಿಕರಣ.., ಮುಂತಾದ ರೀತಿಯಲ್ಲಿ ಅವರ ಗಮನ ಸೆಳೆಯುವುದಕ್ಕೆ ಈ ಚಟುವಟಿಕೆ ಕಾರಣವಾಯಿತು.
SMSSS ಸಂಸ್ಥೆಯ ಸಂಯೋಜಕರಾದ ಶ್ರೀ ಯುತ ಜಗದೀಶ್ ರವರು 03 ಗಂಪುಗಳನ್ನಾಗಿ ಮಾಡಿ ಚಟುವಟಿಕೆಗಳನ್ನು ಹಂಚಿಕೆ ಮಾಡಿದರು. ಮತ್ತು ಒಂದು ಹೊಸ ಉದ್ದೇಶವನ್ನು ಕೂಡಾ ಈ ಚಟುವಟಿಕೆಯಲ್ಲಿ ಅಳವಡಿಸಿದರು ಚೈತನ್ಯ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಿದರು.