ಶಿವಮೊಗ್ಗ ನಗರದ ಆಲ್ಕೊಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ)ಯ ಚೈತನ್ಯ ಸಭಾಂಗಣದಲ್ಲಿ ದಿನಾಂಕ ೧೩.೦೧.೨೦೨೫ ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ, ಎಸ್.ಎಮ್.ಎಸ್.ಎಸ್. ಸಂಸ್ಥೆ ಹಾಗೂ ತಾಲ್ಲೂಕು ಸ್ವಸಹಾಯ ಸಂಘಗಳ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ನೆರವಿನ ಕುರಿತು ತರಬೇತಿ ಕಾರ್ಯಗಾರ ಹಾಗೂ ಹೊಸವರ್ಷದ ಆಚರಣೆ ಕಾರ್ಯಕ್ರಮವು ನಡೆಯಿತು.
ಈ ತರಬೇತಿ ಕಾರ್ಯಗಾರವನ್ನು ಎಸ್.ಎಮ್.ಎಸ್.ಎಸ್. ಸಂಸ್ಥೆಯ ನಿರ್ದೇಶಕರಾದ ಫಾದರ್ ಪಿಯುಸ್ ಡಿಸೋಜ ರವರು ಉದ್ಘಾಟಿಸಿ ಮಾತನಾಡಿದರು. ಕಾನೂನು ಇರುವುದು ಸರ್ವರ ಒಳಿತಿಗಾಗಿ ಹಾಗೂ ಸಾಮಾಜದಲ್ಲಿ ಸಾಮರಸ್ಯ, ಸೌಹಾರ್ಧತೆಯಿಂದ ಸರ್ವರು ಒಟ್ಟಿಗೆ ಬಾಳುವಂತಾಗಲು. ಇದನ್ನು ಪುಷ್ಟಿಕರಿಸಲು ನಾವು ಪ್ರಯಾಣಮಾಡುವಾಗ ಕಂದು ಬರುವ ವಿವಿಧ ಸೂಚನಾ ಫಲಕಗಳು ನಮ್ಮ ಸುರಕ್ಷತೆಗಾಗಿ ಹೇಗೆ ನೆರವಾಗುತ್ತವೆ ಹಾಗೂ ಅದನ್ನು ಪಾಲಿಸಿದಿದ್ದರೆ ಅಗುವ ಅನಾಗುತಗಳು ಏನು ಎಂಬ ಉದಾರಹಣೆಯೊಂದಿಗೆ ಕಾನೂನಿನ ಮಹತ್ವವನ್ನು ಮನದಟ್ಟು ಮಾಡಿದರು. ಪ್ರತಿಯೊಬ್ಬರಿಗೂ ನಿಯಮಗಳನ್ನು ಪಾಲಿಸಲು ಕಾನೂನುಗಳು ಮತ್ತು ಇಲಾಖೆಗಳ ವ್ಯವಸ್ಥೆಗಳಿವೆ. ನಿಯಮಗಳನ್ನು ಉಲ್ಲಂಘಿಸಿ ಸಂಚರಿಸಿದಲ್ಲಿ ಯಾವುದೇ ರೀತಿಯ ಕಾನೂನಿನ ಶಿಕ್ಷೆಗೆ ಗುರಿಯಾಗುವುದು ತಪ್ಪುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಒಳಿತು ಕೆಡಕು ಮಧ್ಯದಲ್ಲಿ ಒಳಿತನ್ನು ಆಯ್ಕೆ ಮಾಡಿಕೊಂಡು ಜೀವನ ನಡೆಸಿದ್ದಲ್ಲಿ, ಎಲ್ಲರೂ ಸುಖವಾಗಿರುತ್ತಾರೆ. ಅರಿವೇ ಗುರು ಎಂಬAತೆ ಈ ದಿನದ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ತರಬೇತಿ ಎಲ್ಲರಿಗೂ ಅತ್ಯಗತ್ಯವಾಗಿದೆ. ಬಡ ಮತ್ತು ಶೋಷಿತರು ಕಾನೂನು ನೆರವು ಪಡೆದುಕೊಂಡು ತಮ್ಮ ಮೇಲೆ ಆಗುವ ಶೋಷಣೆಗಳಿಗೆ ಪರಿಹಾರವನ್ನು ಕಾನೂನಿನ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದರು.
ಈ ತರಬೇತಿ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಸಂತೋಷ್ ಎಂ.ಎಸ್., ಗೌರಾವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಇವರು ಮಾತನಾಡಿ ರಾಷ್ಟಿçÃಯ ಯುವ ದಿನಾಚರಣೆಯ ಶುಭಾಶಯವನ್ನು ಕೋರುತ್ತಾ, ೧೯೮೦ರಲ್ಲಿ ಕಾನೂನು ಪ್ರಾಧಿಕಾರ, ತಾಲ್ಲೂಕು, ಜಿಲ್ಲಾ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರಚನೆಯಾಗಿರುವ ಬಗ್ಗೆ ಪರಿಚಯಿಸಿದರು. ಕಾನೂನು ಸೇವಾ ಪ್ರಾಧಿಕಾರದಲ್ಲಿ ಮುಖ್ಯವಾಗಿ ಕಾನೂನಿನ ಅರಿವು ಮೂಢಿಸುವುದು, ಪ್ಯಾನಲ್ ವಕೀಲರ ಮುಖಾಂತರ ಕಾನೂನಿನ ನೆರವು ನೀಡುವುದು, ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರು ಸದುಪಯೋಗ ಪಡೆದುಕೊಂಡು ಯಾವುದೇ ತರದ ಸಮಸೈಗಳಿಗೆ ಕಾನೂನು ಸೇವೆಗಳ ಪ್ರಾಧಿಕಾರದ ಮುಖಾಂತರ ನೆರವು ಪಡೆದುಕೊಳ್ಳಬಹುದಾಗಿದೆ. ಲೋಕ ಅದಾ¯ತ್ ಮೂಲಕ ೩ ತಿಂಗಳಿಗೊಮ್ಮೆ ರಾಷ್ಟಿçÃಯ ಲೋಕ ಅದಾಲತ್ ಸಿವಿಲ್ ಪ್ರಕರಣಗಳನ್ನು ರಾಜೀ ಮಾಡಿಕೊಳ್ಳುವುದು ಹಾಗೂ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದು. ವರ್ಷದಲ್ಲಿ ೪ ಬಾರಿ ಲೋಕ ಅದಾಲತ್ ನಡೆಸಲಾಗುವುದು. ಗರ್ಭದಿಂದ ಗೋರಿಯವರಿಗೆ ಮಹಿಳೆಯರಿಗೆ ಕಾನೂನುಗಳಿವೆ. ಮಹಿಳೆಯರಿಗಿರುವ ಕಾನೂನು ವ್ಯವಸ್ಥೆಗಳಾದ ಲಿಂಗ ಪತ್ತೆ ಮಾಡುವುದು ಕಾನೂನು ಅಪರಾಧ, ಪೋಕ್ಸೋ ಕಾಯ್ದೆ, ಲೈಂಗಿಕ ಕಿರುಕುಳ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಕಾಯ್ದೆ, ಹಿರಿಯ ನಾಗರೀಕರಿಗೆ ಇರುವ ಕಾನೂನು ವ್ಯವಸ್ಥೆಗಳ ಬಗ್ಗೆ ವಿವರಣೆ ನೀಡಿದರು. ಕುಟುಂಬಕ್ಕೆ, ಸಮಾಜಕ್ಕೆ ನಮ್ಮ ಮೌಲ್ಯಗಳು ಅವಶ್ಯಕವಾಗಿವೆ. ಹಿರಿಯರಿಗೆ ಗೌರವಿಸುವುದು, ಮಕ್ಕಳಿಗೆ ಸಂಸ್ಕಾರ ನೀಡುವುದು, ಸಮಸ್ಯೆಗಳು ಉಂಟಾದಾಗ ಕಾನೂನು ರಕ್ಷಣೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾದಕ ವ್ಯಸನಗಳು ಜಿಲ್ಲೆಯಲ್ಲಿ ಅತೀ ದೊಡ್ಡ ಪ್ರಕರಣಗಳಾಗಿವೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮೌಲ್ಯಗಳನ್ನು ಕಲಿಸಿ, ಅವರಿಗೆ ಸಂಸ್ಕಾರವನ್ನು ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಜವಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ನಾವುಗಳು ಇನ್ನೊಬ್ಬರ ಮೇಲೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ ಮೌಲ್ಯಗಳನ್ನು ಕಾಪಾಡಿಕೊಳ್ಳೋಣ ಎಂದು ವಿವರಾತ್ಮಕ ಮಾಹಿತಿಯನ್ನು ನೀಡಿದರು. ಈ ತರಬೇತಿ ಕಾರ್ಯಗಾರದ ಅಧ್ಯಕ್ಷತೆಯನ್ನು ಸಮೃದ್ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಷ್ಟ ರವೀಂದ್ರ ರವರು ವಹಿಸಿದ್ದರು. ತರಬೇತಿ ಕಾರ್ಯಗಾರದಲ್ಲಿ ಶ್ರೀಮತಿ ಆಶಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವರನ್ನು ಶ್ರೀಮತಿ ಶರ್ಪೃನ್ನೀಸ ರವರು ಸ್ವಾಗಿತಿಸಿದರು. ಕೊನೆಯಲ್ಲಿ ಆಯನೂರು ಕೋಟೆಯ ಶ್ರೀಮತಿ ರೂಪರವರು ವಂದಿಸಿದರು.