ನಗರದ ಆಲ್ಕೋಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ಹಾಗೂ ಚಾಮುಂಡಿಪುರ ಗ್ರಾಮ ಸ್ವ-ಸಹಾಯ ಸಂಘಗಳ ಸಹಯೋಗದಲ್ಲಿ ದಿ:04-02-2025ರಂದು ಮಂಗಳವಾರ ಬೆಳಗ್ಗೆ 10:30ಕ್ಕೆ ವಿಶ್ವ ಕ್ಯಾನ್ಸರ್ ಅರಿವು ದಿನಾಚರಣೆಯ ಕಾರ್ಯಕ್ರಮವು ಶಿವಮೊಗ್ಗ ತಾಲ್ಲೂಕಿನ ಚಾಮುಂಡಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ವಿಶ್ವ ಕ್ಯಾನ್ಸರ್ ಅರಿವು ದಿನಾಚರಣೆ ಕಾರ್ಯಕ್ರಮವನ್ನು SMSSS ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಪಿಯುಸ್ ಡಿ'ಸೋಜ ರವರು ಉದ್ಘಾಟಿಸಿ ಮಾತಾನಾಡಿ ಕ್ಯಾನ್ಸರ್ ಮಹಾಮಾರಿ. ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ದೈಹಿಕ ಕ್ಯಾನ್ಸರ್ ಒಂದಾದರೆ ಮಾನಸಿಕ ಕ್ಯಾನ್ಸರ್ ಮತ್ತೊಂದಾಗಿದೆ. ದೇಹಕ್ಕೆ ಬರುವ ಕ್ಯಾನ್ಸರ್ ಗಿಂತ ಮನಸ್ಸಿಗೆ ಬರುವ ಕ್ಯಾನ್ಸರ್ ತುಂಬಾ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ದೈಹಿಕ ಕ್ಯಾನ್ಸರ್ ಗೆ ಔಷಧಿ ಹೊರಗಡೆ ಪಡೆದರೆ, ಮಾನಸಿಕ ಕ್ಯಾನ್ಸರ್ ಗೆ ನಮ್ಮಲ್ಲಿಯೇ ಔಷಧಿ ಇದೆ ಎಂಬಂತೆ ಪ್ರತಿಯೊಬ್ಬರು ಹೊಟ್ಟೆಕಿಚ್ಚು ಪಡದೆ ಸಂತೋಷ, ನಲಿವು, ಇತರರನ್ನು ಪ್ರೀತಿಸುವುದು, ಗೌರವಿಸುವುದು ಕಲಿತಾಗ ಹೊಟ್ಟೆಕಿಚ್ಚು ಮಾಯವಾಗುತ್ತದೆ. ಹೊಟ್ಟೆಕಿಚ್ಚು ನಮ್ಮನ್ನು ಸುಡುತ್ತದೆ. ಪ್ರತಿಯೊಬ್ಬರು ಮಾರಣಾಂತಿಕ ಕಾಯಿಲೆಯಿಂದ ದೂರವಿರಬೇಕಾದರೆ ದುಷ್ಚಟಗಳಿಂದ ದೂರವಿರುವುದು, ಉತ್ತಮ ಜೀವನ ಶೈಲಿಯನ್ನು ನಡೆಸುವುದು, ಕ್ರಮಬದ್ಧ ಆಹಾರ ಸೇವನೆ, ದೈನಂದಿನ ಬದುಕಿನಲ್ಲಿ ಮೌಲ್ಯಗಳನ್ನು ಬೆಳೆಸಿಕೊಂಡರೆ ಮಾರಣಾಂತಿಕ ಕಾಯಿಲೆಯಿಂದ ಪಾರಾಗಬಹುದು ಎಂದರು.
ವಿಶ್ವ ಕ್ಯಾನ್ಸರ್ ಅರಿವು ದಿನಾಚರಣೆಯಲ್ಲಿ ಆಯನೂರು ಸಮುದಾಯ ಆರೋಗ್ಯ ಕೇಂದ್ರ & ಕುಂಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ರುದ್ರಾಂಬಿಕೆರವರು ಮಾತಾನಾಡಿ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದ್ದು, ಜೀವಕೋಶಗಳಿಂದ ಮಾರ್ಪಟ್ಟಿದ್ದು ಮನುಷ್ಯನ ದೇಹದ ಭಾಗದಲ್ಲಿ ಅನಿಯಂತ್ರಿತ ತಪ್ಪಿದಾಗ ಕಾಯಿಲೆ ಹರಡುತ್ತದೆ. ಈ ಕಾಯಿಲೆಯು ಯಾವುದೇ ಜಾತಿ-ಧರ್ಮ, ಬಡವ-ಶ್ರೀಮಂತರಿಗೆ, ಸೀಮಿತವಾಗಿರದೇ ಎಲ್ಲಾ ಜಾತಿ, ವರ್ಗ ವಯೋಮಿತಿ ಎನ್ನದೆ ಭೀಕರವಾಗಿ ಹರಡುವ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಗರ್ಭಕೋಶ, ಸ್ತನ, ಕರುಳು, ರಕ್ತ, ಮೂಳೆ, ಗಂಟಲು, ವಿವಿಧ ರೀತಿಯಲ್ಲಿ ಹರಡುವ ಬಗ್ಗೆ ವಿವರಣೆ ನೀಡಿದರು. ಪ್ರತಿಯೊಬ್ಬರು ಕಾಯಿಲೆ ಬಗ್ಗೆ ಜಾಗೃತರಾಗಿ, ಉತ್ತಮ ಜೀವನ ಶೈಲಿ, ಯೋಗ, ವ್ಯಾಯಮ, ನಡಿಗೆ, ಉತ್ತಮ ಆಹಾರದ ಕ್ರಮ , ಪೌಷ್ಠಿಕ ಆಹಾರ, ಮುಂತಾದವುಗಳನ್ನು ಬೆಳೆಸಿಕೊಳ್ಳಿ. ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಬೆಳೆಸುವುದರ ಜೊತೆಗೆ ಆರೋಗ್ಯವಂತರನ್ನಾಗಿಸಿ ಉತ್ತಮ ಸಂಸ್ಕಾರವಂತ ಮಕ್ಕಳನ್ನಾಗಿ ಬೆಳೆಸಿ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಆಯನೂರು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶಘುಫ್ತಾಖಾನ್ ರವರು ಮಾತಾನಾಡಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಬಡ ಹಾಗೂ ಶೋಷಿತ ಜನರಿಗಾಗಿ ಮಾಡುವ ಕೆಲಸ ಕಾರ್ಯಗಳನ್ನು ಶ್ಲಾಘಿಸುತ್ತಾ, ಈ ದಿನ ಮಕ್ಕಳನ್ನು ಒಗ್ಗೂಡಿಸಿ ಮಾಡುತ್ತಿರುವ ಕಾರ್ಯ ಉತ್ತಮವಾಗಿದೆ. ಮಾತಿಗಿಂತ ಮಾಡಿದ ಕಾರ್ಯಗಳು ಒತ್ತಿ ಹೇಳುತ್ತದೆ. ಎನ್ನುವ ಹಾಗೆ ಸಂಸ್ಥೆಯ ಕೆಲಸ ಕಾರ್ಯಗಳು ಎಲೆಮರೆ ಕಾಯಿಯಾಗಿ ಸಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ಮಲ್ಲಿಕಾರ್ಜುನ್ ರವರು ಉಪಸ್ಥಿತರಿದ್ದರು. ಕಾರ್ಯುಕ್ರಮದಲ್ಲಿ ಶ್ರೀಮತಿ ವರ್ಷ ರವರು ನಿರೂಪಿಸಿದರು. ಶ್ರೀಮತಿ ಸುನಿತಾ ರವರು ಸ್ವಾಗತಿಸಿದರು. ಕೊನೆಯಲ್ಲಿ ಶ್ರೀ ಮತಿ ನಿಂಗಮ್ಮರವರು ವಂದಿಸಿದರು.