ನಗರದ ಆಲ್ಕೋಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ(ರಿ) ವತಿಯಿಂದ ದಿ:04-02-2025ರ ಮಂಗಳವಾರ ದಂದು ಮಿಳಘಟ್ಟ ಸಮುದಾಯ ಭವನದಲ್ಲಿ ವಿಶ್ವ ಕ್ಯಾನ್ಸರ್ ಅರಿವು ದಿನಾಚರಣೆಯ ಕಾರ್ಯಕ್ರಮವು ನಡೆಯಿತು.
ವಿಶ್ವ ಕ್ಯಾನ್ಸರ್ ಅರಿವು ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಡಾ.ನಟರಾಜ್ ಉದ್ಘಾಟಿಸಿ ಮಾತಾನಾಡಿ ಆರೋಗ್ಯದ ಬಗ್ಗೆ ಜಾಗೃತಿ ಹೊಂದಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಆರೋಗ್ಯ ಇಲಾಖೆಯಿಂದ ಉಚಿತವಾಗಿ ತಪಾಸಣೆಗಳನ್ನು ನಡೆಸಲಾಗುವುದು ಇದರ ಸದುಪಯೊಗ ಪಡೆದುಕೊಳ್ಳಿ ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣ ಅಧಿಕಾರಿ ಡಾ.ನಾಗರಾಜ್ ಮಾತಾನಾಡಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿ ತಮ್ಮ ಕುಟುಂಬದ ಅಭಿವೃದ್ಧಿಗೆ ಪ್ರ,ಮುಖ ಪಾತ್ರವಹಿಸಬೇಕು. ಆರೋಗ್ಯ ಸೌಲಭ್ಯಗಳು & ಆರೋಗ್ಯ ಕಾರ್ಡುಗಳ ಸದುಪಯೋಗ ಪಡೆದುಕೊಂಡು ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಹೊಂದಿದ್ದಲ್ಲಿ ಗುಣ ಮುಖರಾಗಬಹುದು ಎಂದರು. ಕ್ಯಾನ್ಸರ್ನ ವಿವಿಧ ಬಗೆಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಈ ಮಾರಣಾಂತಿಕ ಕಾಯಿಲೆಯಿಂದ ದೂರವಿರಲು ದುಷ್ಚಟಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮದ ಸಂಯೋಜಕರಾದ ಡಾ.ಆಸೀಫ್, ಸೂಕ್ಷ್ಮಜೀವಶಾಸ್ತ್ರ ತಜ್ಞ ಡಾ.ಮಂಜುನಾಥ್ ಪಾಟೀಲ್, ಸಂಧ್ಯಾ ಸಾಲೋಮನ್, ತುಂಗಾ ನಗರ ಆಸ್ಪತ್ರೆಯ ನಿವೃತ್ತ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಯುತ ಅಖ್ತರ್ ರವರು ಆಗಮಿಸಿದ್ದರು. ಇವರು ಕ್ಯಾನ್ಸರ್ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮ ಹಾಗೂ ಆಸ್ಪತ್ರೆಯಿಂದ ಸಿಗುವ ಉಚಿತ ತಪಾಸಣೆ & ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪುಷ್ಪಾಲತಾ ರವೀಂದ್ರ ಹಾಗೂ ದೀಪಾ ಮಹೇಶ ರವರು ಹಾಜರಿದ್ದರು. ಈ ಕಾರ್ಯಕ್ರಮದ ಅಂಗವಾಗಿ ಸಂಘಗಳ ಮಹಿಳೆಯರಿಗೆ ಹಾಗೂ ಸಮುದಾಯದ ಜನರಿಗೆ ರಕ್ತದೊತ್ತಡ, ಮಧುಮೇಹ, ತಪಾಸಣಾ ಶಿಬಿರವನ್ನು ನಡೆಸಲಾಯಿತು. ಶಿಬಿರದಲ್ಲಿ 86 ಮಹಿಳೆಯರು ಮತ್ತು ಸಮುದಾಯದ ಜನರು ಪರೀಕ್ಷೆ ಮಾಡಿಸಿಕೊಂಡರು.